
ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ
ಎಲ್ಲೆಲ್ಲಿ ನೋಡಿದರಲ್ಲಿ ಶ್ರೀರಾಮ
ರಾವಣನ ಮೂಲಬಲ ಕಂಡು ಕಪಿಸೇನೆ
ಆವಾಗಲೇ ಬೆದರಿ ಓಡಿದವು
ಈ ವೇಳೆ ನರನಾಗಿ ಇರಬಾರದೆಂದೆನಿಸಿ
ದೇವ ರಾಮಚಂದ್ರ ಜಗವೆಲ್ಲ ತಾನಾದ ।। ಅಲ್ಲಿ ನೋಡಲು ।।
ಅವನಿಗೆ ಇವ ರಾಮ ಇವನಿಗೆ ಅವ ರಾಮ
ಅವನಿಯೋಳ್ ಈ ಪರಿ ರೂಪ ಉಂಟೆ
ಲವ ಮಾತ್ರದಿ ಅಸುರ ದುರುಳರೆಲ್ಲರು
ಅವರವರು ಹೊಡೆದಾಡಿ ಹತರಾಗಿ ಹೋದರು ।। ಅಲ್ಲಿ ನೋಡಲು ।।
ಹನುಮದಾದಿ ಸಾಧುಜನರು ಅಪ್ಪಿಕೊಂಡು
ಕುಣಿ ಕುಣಿದಾಡಿದರು ಹರುಷದಿಂದ
ಕ್ಷಣದಲ್ಲಿ ಪುರಂದರವಿಠಲರಾಯನು
ಕೊನೆಗೊಡೆಯನು ತಾನೋಬ್ಬನಾಗಿ ನಿಂತ ।। ಅಲ್ಲಿ ನೋಡಲು ।।
Lyrics in Engilsh:
Alli noodalu raama illi nodalu raama
ellelli noDidaralli Shreeraama
Raavanana mulabala kandu kapisene
aavagale bedari oDidavu...
ee veLe naranaagi irabaaradendenisi...
deva raamachandra jagavella thaanaada... || Alli Nodalu ||
avanige iva raama ivanige ava raama
avaniyouL ee pari roopa unte...
lava maathradi asura duruLarellaru
avaravaru HoDedaaDi hatharaagi Hooodaru
|| Alli nodalu ||
Hanumadaadi sadhijanaru appikondu
kuNi kuNidaaDidaru HaruShadinda
kshnadalli purandaravittalaraayalu
konegodeyanu thaanobbanaagi nintha
||Alli nodalu ||
No comments:
Post a Comment